Nammuru..... Nammajana

ನಮ್ಮೂರು..... ನಮ್ಮ ಜನ....

Wednesday, November 24, 2010

ಬಲಿ..... ಬೇಟೆ....

ಬಲಿ ನಂತರ ಬೇಟೆ..,   
                             (ಚಿರತೆಯ ಹಿಡಿಯಲು ಮಗು ಬಲಿ ಬೇಕಾಯ್ತು!)
.
                     
 ೧.ಎಚ್ಚತ್ತು ಹೇಳಿದರು ಕೇಳದ ಅರಣ್ಯ ಇಲಾಖೆ             



                            ೨.ಬೇಟೆ ನಂತರ ಜನರು ಹೇಳಿದ್ದು ಇನ್ನೊಂದಿದೆ..,  
                                ಕಾಡು ಕಡಿಯುತ್ತಿರೋ   ಕಾವಲು ಜನ....                          


     ೩ .ಟೋಂಕ ಕಟ್ಟಿ ನಿಂತ ಜನ ಬೇಟೆಗೆ ಹೊರಟರು...,  

  



ಕಾಡು ತೊರೆದ ಚಿರೆತೆಗಳು ಮಾಂಸಕ್ಕೆ ಅಲೆಯುತ್ತಿವೆ...
.
  
ಹುಲ್ಲೆನಳ್ಳಿ ಕಾವಲಿನಲ್ಲಿ  ಕಳೆದ ಬಾನುವಾರ  ಸಂಜೆ ಚಿರತೆಯೊಂದು ಪುಟಾಣಿ ಕಿರಣ್ ಎಂಬುವ ಕಂದಮ್ಮವನ್ನು ತಾಯಿಯ ಎದುರೆ  ಹೊತ್ತೋಯ್ದು  ಅರ್ದ ತಂದು ಪರಾರಿಯಾದ  ಘಟನೆ ನೆಡೆದಿತ್ತು.


ಮಗುವನ್ನು ಬಲಿ ತೆಗೆದುಕೊಂಡ ನರಭಕ್ಷಕ ಚಿರತೆ ಮರುದಿನ ಅದೇ ಸ್ಥಳದಲ್ಲಿ ಸೆರೆ ಸಿಕ್ಕಿದೆ. ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ಒಂದಷ್ಟು ದೂರವಾಗಿದೆ.
ಅಂದಾಜು ನಾಲ್ಕು ವರ್ಷ ಪ್ರಾಯದ ಹೆಣ್ಣು ಚಿರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಬಂಧಿಯಾಗಿದ್ದು, ಶಿವಮೊಗ್ಗ ಸಮೀಪದ ತಾವರೆಕೊಪ್ಪ ಚಿರತೆಧಾಮಕ್ಕೆ ಸಾಗಿಸಲಾಯಿತು. 
.
 ಮತ್ತೆ ವಾಸನೆ ಹಿಡಿದು ಬಂದಿತ್ತು: ಬಿಟ್ಟು ಹೋಗಿದ್ದ ಮಗುವಿನ ಅರ್ಧದೇಹವನ್ನು ಮತ್ತೆ ಅದು ಹುಡುಕಿ ಬರುವ ಅಂದಾಜಿನಲ್ಲಿ ಅಲ್ಲಿಯೇ ಬೋನು ಇಡಲಾಗಿತ್ತು. ಹಾಗಾಗಿ ಸಿಕ್ಕಿಬಿದ್ದಿರುವ ಚಿರತೆ ಮಗುವನ್ನು ಬಲಿ ತೆಗೆದುಕೊಂಡಿದ್ದೇ ಇರಬಹುದು ಎಂದು ಅಂದಾಜಿಸಲಾಗಿದೆ. ಹುಲ್ಲೇನಹಳ್ಳಿ ಅಮೃತ ಮಹಲ್ ಕಾವಲಿನಲ್ಲಿ ನಾಲ್ಕೈದು ಚಿರತೆ ಇರುವುದಾಗಿ ಗ್ರಾಮಸ್ಥರು ಹೇಳುವುದರಿಂದ ಆತಂಕ ಸಂಪೂರ್ಣ ದೂರವಾಗಿಲ್ಲ. ಮಗು ಸಾವಿನಿಂದ ಸುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಿದ್ದ ಅರಣ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳಿಗೆ ತಲೆಬಿಸಿ ಸ್ವಲ್ಪ ಕಡಿಮೆಯಾಗಿದೆ.


ಫಲಿಸಿದ ತಂತ್ರ: ಮಗು ಸಾವಿನಿಂದ ರೊಚ್ಚಿಗೆದ್ದ ಸುತ್ತಲಿನ ಜನತೆ ಅಧಿಕಾರಗಳ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದರು. ಎಲ್ಲಾ ಚಿರತೆಗಳನ್ನು ಹಿಡಿದು ಸಾಗಿಸಬೇಕೆಂದು ಒತ್ತಾಯಿಸಿದ್ದರು. ಈಚೆಗೆ ಈ ವ್ಯಾಪ್ತಿಯಲ್ಲಿ ಬೋನು ಇಟ್ಟರೂ ಚಿರತೆ ಬೀಳದ್ದರಿಂದ ಅಪಾಯಕಾರಿ ಚಿರತೆಯನ್ನು ಕೊಲ್ಲಲು ಮೇಲಧಿಕಾರಿಗಳಿಂದ ಅನುಮತಿ ಪಡೆಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಜತೆಗೆ ಚಿರತೆ ಹಿಡಿಯಲು ವಿಶೇಷ ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಹಾಗಾಗಿ ವಿಶೇಷ ಭೋಜನವಿಟ್ಟು ಚಿರತೆ ಆಕರ್ಷಿಸಲು ಮೇಕೆ ಕೊಂಡುತಂದು ಬೋನಿನಲ್ಲಿ ಕಟ್ಟಿದ್ದರು. ಕತ್ತಲಾಗುತ್ತಿದ್ದಂತೆ ಅದನ್ನು ಪೊದೆಯಲ್ಲಿಟ್ಟ ಅರಣ್ಯ ಇಲಾಖೆಯ ನಾಲ್ಕೈದು ಸಿಬ್ಬಂದಿ ಅಲ್ಲಿಯೇ ಸ್ವಲ್ಪ ದೂರದಲ್ಲಿ ಕಾಯುತ್ತಿದ್ದರು

.
ಬಚಾವ್: ರಾತ್ರಿ ೧೦.೩೦ರಲ್ಲಿ ಬೋನಿನ ಬಾಗಿಲಿನ ಸದ್ದಾದ ತಕ್ಷಣ ಓಡಿ ಹೋಗಿ ನೋಡಿದರೆ ಮೇಕೆ ಸತ್ತಿತ್ತು, ಚಿರತೆ ಪರಾರಿಯಾಗಿತ್ತು. ಮೇಕೆಗೆ ಬಾಯಿ ಹಾಕಲು ಚಿರತೆ ಬೋನಿನ ಒಳಗೆ ಹೋಗುತ್ತಿದ್ದಂತೆ ಸನ್ನೆಯ ಮೂಲಕ ಬಾಗಿಲೇನೋ ಬಿದ್ದಿತ್ತು. ಆದರೆ ಪೂರ್ತಿ ಮುಚ್ಚಿಕೊಳ್ಳದೆ ಅರ್ಧಕ್ಕೆ ನಿಂತಿದ್ದರಿಂದ ಚಿರತೆ ಪರಾರಿಯಾಗಿತ್ತು. ಬೋನಿನ ಬಾಗಿಲು, ಗಾಲಿ ತುಕ್ಕುಹಿಡಿದಿದ್ದು ಈ ವೈಫಲ್ಯಕ್ಕೆ ಕಾರಣವಾಗಿತ್ತು. ಅದನ್ನರಿತ ಸಿಬ್ಬಂದಿ ಬಾಗಿಲು ಸರಿಪಡಿಸಿ ಮತ್ತೆ ಸನ್ನೆ ಹಾಕಿ ಬಂದಿದ್ದರು. ರಾತ್ರಿ ೧ರ ಸಮಯದಲ್ಲಿ ಚಿರತೆ ಸಿಕ್ಕಿಬಿತ್ತು. ಅರಣ್ಯ ಇಲಾಖೆಯ ನಾಗರಾಜು, ಶಿವಪ್ಪ, ಶಂಕರಪ್ಪ, ಬಸವಯ್ಯ, ರಾಮಯ್ಯ, ಬೋಗೇಶ್ ಮತ್ತಿತರು ಈ ಕಾರ್ಯಾಚರಣೆಯಲ್ಲಿದ್ದರು.


ಜನರ ದಂಡು: ವಿಷಯ ತಿಳಿದ ಜನ ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದರು. ಸಿಕ್ಕಿಬಿದ್ದ ಚಿರತೆ ರೊಚ್ಚಿಗೆದ್ದಿತ್ತು. ಮುಂಗಾಲುಗಳಿಂದ ಸರಳುಗಳನ್ನು ಆಕ್ರೋಶದಿಂದ ಪರಚುತ್ತಿತ್ತು. ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಯಕುಮಾರ್ ಮೇಲಧಿಕಾರಿಗಳಿಂದ ಅನುಮತಿ ಪಡೆದು ಸೂಚನೆ ಕೊಡುತ್ತಿದ್ದಂತೆ ಸಿಬ್ಬಂದಿಯೊಂದಿಗೆ ಅಲ್ಲಿನ ಜನ ಸೇರಿಕೊಂಡು ಪೊದೆ ಕಡಿದು ಬೋನನ್ನು ಹೊರಗೆ ತಂದು ಬಯಲಲ್ಲಿಟ್ಟರು. ನೂಕುನುಗ್ಗಲಿನಲ್ಲಿ ಜನ ವೀಕ್ಷಿಸಿದರು. ನಂತರ ಅದನ್ನು ಹುಲ್ಲೇನಹಳ್ಳಿ, ತದನಂತರ ಬಜಗೂರಿನಲ್ಲಿ ಸ್ವಲ್ಪ ಹೊತ್ತು ಇಟ್ಟು ತಿಪಟೂರಿನ ಅರಣ್ಯ ಇಲಾಖೆ ಕಚೇರಿ ಬಳಿಗೆ ತರಲಾಯಿತು. ಅಲ್ಲಿ ಮಧ್ಯಾಹ್ನದವರೆಗೆ ಜನ ಅದನ್ನು ವೀಕ್ಷಿಸಿದರು. ಪಶು ವೈದ್ಯಾಧಿಕಾರಿಗಳಿಂದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿ ಮೇಲಧಿಕಾರಿಗಳ ಸಲಹೆಯಂತೆ ತಾರೆಕೊಪ್ಪ ಧಾಮಕ್ಕೆ ಸಾಗಿಸಲಾಯಿತು

.
  ಸವಲತ್ತು ಇಲ್ಲವಂತೆ; ಅಧಿಕಾರಿ  : ತಮ್ಮ ಕಚೇರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾಗಡಯ್ಯ ಪತ್ರಕರ್ತರ ಜತೆ ಮಾತನಾಡಿ, ತಾಲ್ಲೂಕಿನ ಹಲವೆಡೆ ಚಿರತೆ ಹಾವಳಿ ಇರುವುದು ನಿಜ. ಏಕೈಕ ಬೋನು ಇರುವುದರಿಂದ ಸದಾ ಸಂಚಾರಿಯಾದ ಚಿರತೆಗಳಿಗೆ ಉರುಳು ಹಾಕಲು ಕಷ್ಟವಾಗಿತ್ತು. ಮತ್ತೊಂದನ್ನು ಈಗ ಸಿದ್ದಪಡಿಸಿಕೊಂಡಿದ್ದೇವೆ. ಕನಿಷ್ಠ ನಾಲ್ಕೈದು ಬೋನುಗಳ ಅಗತ್ಯವಿದೆ. ಸಿಬ್ಬಂದಿ, ಸವಲತ್ತು ಕೊರತೆಯಿಂದ ಚಿರತೆ ಹಾವಳಿ ಸಂಪೂರ್ಣ ತಡೆಯಲು ಆಗುತ್ತಿಲ್ಲ. ಆದರೆ ಪ್ರಯತ್ನ ಬಿಟ್ಟಿಲ್ಲ ಎಂದರು.
ನೆರವು: ಮೃತ ಬಾಲಕನ ಪೋಷಕರಿಗೆ ಬಜಗೂರು ಗ್ರಾಮ ಪಂಚಾಯಿತಿಯಿಂದ ೫ ಸಾವಿರ ರೂಪಾಯಿ ಚೆಕ್ಕ ನೀಡಲಾಗಿದೆ.
cheetah-1ಇದಕ್ಕಿಂತ ದೊಡ್ಡದಿದೆ
ಚಿರತೆ ಹಿಡಿದ ಖುಷಿಯಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಕುಳಿತಿದ್ದಾಗ ಬೆದರಿದ ಭಾವದಲ್ಲಿ ಅಲ್ಲಿಗೆ ಬಂದ ನಗರ ಸಮೀಪದ ಮಹಿಳಾ ಐಟಿಐ ಕಾಲೇಜು ಬಳಿ ತೋಟದ ಮನೆಯ ವ್ಯಕ್ತಿಯೊಬ್ಬ, ಸಾರ್ ನಮ್ಮ ಮನೆ ಪಕ್ಕ ಇವತ್ತು ಬೆಳಗ್ಗೆ ಚಿರತೆ ಬಂದಿತ್ತು. ದುರುಗುಟ್ಟು ನೋಡಿದ ಅದನ್ನು ಕಂಡು ಬೆಚ್ಚಿದ್ದೇವೆ. ಬನ್ನಿ ಸಾರ್ ಹಿಡ್ಕೊಂಡ್ಹೋಗಿ ಎಂದು ಗೋಗರೆದ. ಬೋನುಗಳಿಲ್ಲ, ಮತ್ತೊಮ್ಮೆ ಕಂಡಾಗ ತಿಳಿಸು ಬರುತ್ತೇವೆ ಎಂದು ಅಧಿಕಾರಿಗಳು ಹೇಳಿದಾಗ ಆತಂಕದಿಂದಲೇ ಆತ ಅಲ್ಲಿಂಗ ಕಾಲು ಕಿತ್ತ.
ನಾಲ್ಕೈದು ಚಿನ್ನಾಟ ಆಡ್ತಾವೆ
ಹುಲ್ಲೇನಹಳ್ಳಿ ಕಾವಲಿನಲ್ಲಿ ಸಿಕ್ಕ ಚಿರತೆ ನೋಡಲು ಬಂದ ವ್ಯಕ್ತಿಯೊಬ್ಬ, ಇದೊಂದೇ ಅಲ್ಲ ಕಂಡ್ರೀ ಇಲ್ಲಿರೋದು. ಇದಕ್ಕಿಂತ ದೊಡ್ಡ ಚಿರತೆಗಳನ್ನು ಕಂಡಿದ್ದೇನೆ. ನಾಲ್ಕೈದು ಸೇರಿ ಚಿನ್ನಾಟ ಆಡುವುದನ್ನೂ ನೋಡಿದ್ದೇನೆ ಎಂದರು. ಪಕ್ಕದಲ್ಲಿದ್ದ ಅಜ್ಜಿಯೊಬ್ಬರು ಮೊನ್ನೆ ನಮ್ಮ ಮನೆ ಪಕ್ಕದಲ್ಲೇ ನಡೆದು ಹೋಯ್ತಲ್ರೀ ಎಂದು ಆತಂಕದಿಂದ ಹೇಳಿದರು. ಮತ್ತಷ್ಟು ಬೋನು ತಂದಿಡಿ ಎಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಅಲವತ್ತುಕೊಂಡರು.
ಶಾಪ ಹಾಕಿದ ಪೋಷಕರು
ಹುಲ್ಲೇನಹಳ್ಳಿಗೆ ತಂದ ಚಿರತೆಯನ್ನು ಮೃತ ಬಾಲಕನ ತಂದೆ, ತಾಯಿ ದುಗುಡದಿಂದಲೇ ವೀಕ್ಷಿಸಿ ಶಾಪ ಹಾಕಿದರು. ಇದ್ದೊಬ್ಬ ಮಗನ್ನ ಕಿತ್ಕೊಂಡೆಯಾ ಎಂದು ಅಳುತ್ತಿದ್ದರು. ಚಿರತೆ ಹಿಡಿಯಲು ನಮ್ಮ ಮಗ ಸಾಯಬೇಕಾಯಿತಾ ಎಂದು ಅಧಿಕಾರಿಗಳನ್ನು ಶಪಿಸಿದರು.




  

1 comment:

Blog Archive