Nammuru..... Nammajana

ನಮ್ಮೂರು..... ನಮ್ಮ ಜನ....

Tuesday, December 14, 2010

ಕಾಡಾನೆ ದಿಕ್ಕು ತಪ್ಪಿ...

ಮದಗಜ ನರಹಂತಕನಾದ..
ಆರನೆ ಬಲಿಗೆ ಪ್ರಕೃತಿ ಪ್ರೇಮಿಯನ್ನೇ ಬಲಿ ತೆಗೆದುಕೂಂಡ..

ಕೂನೆಗೂ ಸೆರೆಸಿಕ್ಕಿತು ಪುಂಡಾನೆ.. ಗಂಡಾನೆಯ ಪುಂಡಾಟಕೆ ಆರನೇ ಬಲಿ..
ಬಲಿಯಾಗಿದ್ದು ವನ್ಯಜೀವಿ ಪ್ರೇಮಿ!
ane1


ತಿಪಟೂರಿನ ಸುತ್ತ ಮುತ್ತಲಿನ ಅರಣ್ಯ ಒಳಗೂಂಡ ಪುಟ್ಟ ಊರುಗಳಲ್ಲಿನ ಜನ ನಿದ್ದೆ ಮರೆತು ಜೀವ ಹಿಡಿದು ಕೂರುವಂತಾಗಿದೆ.ಕಾರಣ ಕಾಡು ತೂರೆದು ನಾಡಿಗೆ ಬರುತ್ತಿರುವ ಕಾಡು ಮೃಗಗಳು. ಮೊನ್ನೆಯಷ್ಟೇ ಹುಲ್ಲೆನಳ್ಳಿ ಕಾವಲಿನ ಕಿರಣ್ ಎಂಬುವ ಪುಟ್ಟ ಬಾಲಕನ್ನ ಬಲಿ ತೆಗೆದುಕೂಂಡ ಚಿರತೆ, ಅರಣ್ಯ ಇಲಾಖೆಯವರ ಸಾಹಸದಿಂದ ಸೆರೆಸಿಕ್ಕಿತ್ತು. ಈಗಲೂ ಸೂಗೂರು,ನೂಣವಿನಕೆರೆ ಸುತ್ತ ಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಘರ್ಜನೆ ಆಗಾಗ ಕೇಳಿ ಬರುತ್ತಿದೆ.ಕಿಬ್ಬನಹಳ್ಳಿಯಲ್ಲಿ ಕರಡಿಗಳು ಕಾಣುತ್ತಿವೆ.
yogees-house
The animals photos in Yogeesh home, tipturinfo.com
ಇನ್ನು ಈ ವಿಚಾರಗಳು ಮರೆತು ಮರೆಯಾಗುವ ಮೂದಲೆ ಮದಗಜನ ಸಾವಿನ ಗೀಳಿಡುವಿಕೆಯ ಕೂಂಡಿಗೆ ಆರನೇ ಬಲಿ ಬೆಸೆದುಕೂಂಡಿದೆ, ವಿಚಿತ್ರವೆಂದರೆ ಈ ಬಾರಿ ಬಲಿಯಾಗಿದ್ದು ನಿವೃತ್ತ ಅರಣ್ಯ ವಲೆಯಾಧಿಕಾರಿ ಮಗ ಹಾಗು ವನ್ಯಜೀವಿ ಪ್ರೇಮಿ ಯೋಗೀಶ್! ಗ್ಯಾರಘಟ್ಟ ಸಮೀಪದ ರಾಮೇನಹಳ್ಳಿ ಬಳಿ ತೋಟದ ಮನೆಯ ನಿವಾಸಿ ಯೋಗೀಶ್ ( 35) ವರ್ಷದ ಹಿಂದಷ್ಟೇ ವಿವಾಹವಾಗಿದ್ದ. ತಮ್ಮ ತೋಟದ ತಗ್ಗಿನಲ್ಲಿದ್ದ ಕೆರೆ ಬಳಿ ಹೋದಾಗ ಅಲ್ಲಿದ್ದ ಆನೆ ಹಿಗ್ಗಾಮುಗ್ಗಾ ತುಳಿದು ಅಪ್ಪಚ್ಚಿ ಮಾಡಿತ್ತು. ಇವರ ತಂದೆ ಮೂಲತಃ ಅರಸೀಕೆರೆ ತಾಲ್ಲೂಕು ಕಾಮಸಮುದ್ರ ಸಮೀಪದ ಕಸವನಹಳ್ಳಿ ಗ್ರಾಮದವರಾದ ಇವರು ರಾಮೇನಹಳ್ಳಿ ಬಳಿ ಜಮೀನು ಖರೀದಿಸಿ ಅಲ್ಲಿಯೇ ಮನೆ ಕಟ್ಟಿಕೊಂಡು ವಾಸವಿದ್ದರು. ಬಿಎಸ್ಸಿ ಓದಿದ್ದ ಏಕೈಕ ಪುತ್ರ ಯೋಗೀಶ್‌ಗೆ ಸೋದರಿ ಮಗಳನ್ನೇ ತಂದು ವರ್ಷದ ಹಿಂದೆ ಮದುವೆ ಮಾಡಿದ್ದರು. ಯೋಗೀಶ್ ಪತ್ನಿ ಚೈತ್ರ ತಿಪಟೂರಿನ ಕೆಐಟಿಯಲ್ಲಿ ೪ನೇ ಸೆಮಿಸ್ಟರ್‌ನಲ್ಲಿ ಎಂಜಿನಿಯರಿಂಗ್ ಓದು ಮುಂದುವರಿಸಿದ್ದರು. ಆನೆಯ ರೂಪದಲ್ಲಿ ಬಂದೆರಗಿದ ಆಘಾತ ಇಡೀ ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ.

ಶವದೂಂದಿಗೆ ಆಟವಾಡುತ್ತಿತ್ತು! ಮಾನವನ ಮೇಲೆ ಅದೆಷ್ಟು ಕೋಪವೂ ಉಹಿಸಲಾಗದು ಏಕೆಂದರೆ ಅದು ಯೋಗೀಶ್ ನನ್ನು ಕೂಂದಹಾಕಿರೂ ರೀತಿಯೇ ಅಂತಹದು ನೆಲಕ್ಕೆ ಅ‌ಪ್ಪಚ್ಚಿಯಾಗುವಂತೆ ತುಳಿದು ಮತ್ತೆ ಮತ್ತೆ ತುಳಿದಿದೆ ಎಂದು ನೋಡಿದರೆ ತಿಳಿಯುತಿತ್ತು.ಅದಲ್ಲದೆ ಸುಮಾರು ಎರೆಡು ಗಂಟೆಗಳ ಕಾಲ ಅಲ್ಲೇ ಇದ್ದು ಆಟವಾಡುತಿತ್ತು ಎಂದು ತಿಳಿಯಲಾಗಿದೆ.
ಅರಸೀಕೆರೆ ತಾಲ್ಲೂಕಿನಲ್ಲಿ ನಾಲ್ಕೈದು ತಿಂಗಳಿಂದ ಆತಂಕ ಸೃಷ್ಟಿಸಿ ಇಬ್ಬರನ್ನು ಬಲಿ ತೆಗೆದುಕೊಂಡು ಹಾವಳಿ ಇಟ್ಟಿದ್ದ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಆ ತಾಲ್ಲೂಕಿನ ಹುಣಸೇಗುಂಡಿ ಬಳಿ ಮೂರು ದಿನದ ಹಿಂದೆ ಸಕಲ ಸಿದ್ಧತೆಯೊಂದಿಗೆ ಕ್ಯಾಂಪ್ ಹಾಕಿದ್ದರು. ಆ ಮದಗಜವನ್ನು ಬಂಧಿಸಲು ಪಳಗಿದ ಆನೆಗಳೊಂದಿಗೆ ಪ್ರಯತ್ನಿಸಿದ್ದರು. ಬುಧವಾರ ಸಂಜೆ ತಿಪಟೂರು ತಾಲ್ಲೂಕಿನ ಗಡಿ ಪ್ರವೇಶಿಸಿದ್ದ ಒಂಟಿ ಸಲಗ ಗುರುವಾರ ಬೆಳಗ್ಗೆ ಗ್ಯಾರಘಟ್ಟ ಹೊಸಕೆರೆ ಬಳಿ ಕಾಣಿಸಿಕೊಂಡಿತ್ತು. ಅಲ್ಲಿಗೆ ಕ್ಯಾಂಪ್ ಸಿಬ್ಬಂದಿ ಬೆನ್ನಟ್ಟಿ ಬಂದು ಸೆರೆ ಹಿಡಿಯುವ ಕಾರ್ಯಾಚರಣೆಗೆ ಸಿದ್ಧರಾಗಿದ್ದರು. ಅಷ್ಟರಲ್ಲಿ ಆ ಸ್ಥಳದಿಂದಲೂ ಆನೆ ಕಾಲು ಕಿತ್ತಿತ್ತು. ನಂತರ ಕೆರೆಯ ಆ ದಡದಿಂದ ಕೂಗಿಕೊಂಡ ತೋಟದ ಮನೆಯವರು ಪೊದೆಯ ಸಂದಿಯಲ್ಲಿ ವ್ಯಕ್ತಿಯೊಬ್ಬರ ಶವ ಇರುವುದಾಗಿ ತಿಳಿಸಿದಾಗಲೇ ಯೋಗೀಶ್ ಬಲಿಯಾಗಿದ್ದು ತಿಳಿಯಿತು. ಬೆಳಗ್ಗೆ ೮ರ ಸಮಯದಲ್ಲೇ ಮೃತಪಟ್ಟಿರುವುದು ನಂತರ ದೃಢಪಟ್ಟಿತು.ಈ ದುರಂತದ ನಡುವೆಯೇ ಕ್ಯಾಂಪ್ ಸಿಬ್ಬಂದಿ ಪಳಗಿದ ಆನೆಗಳೊಂದಿಗೆ ಬೆನ್ನತ್ತಿ ಅಲ್ಲಿಗೆ ಸಮೀಪದ ತೋಟವೊಂದರಲ್ಲಿದ್ದ ಒಂಟಿ ಸಲಗಕ್ಕೆ ಮತ್ತು ಬರಿಸುವ ಮದ್ದನ್ನು ಬಂದೂಕು ಮೂಲಕ ಶೂಟ್ ಮಾಡಿದರು.

ಅಲ್ಲಿಂದ ಸುಮಾರು ಒಂದೂವರೆ ಕಿಮೀ ಓಡಿದ ಅದು ನೆಲಕ್ಕುರುಳಿತು. ಕ್ರಿಪ್ರ ಗತಿಯಲ್ಲಿ ಪೂರಕ ಪ್ರಕ್ರಿಯೆ ಮುಗಿಸಿ ಮೂರು ಆನೆಗಳ ಸಹಾಯದಿಂದ ಬಂಧಿಸಿ, ನಿತ್ರಾಣಗೊಳಿಸಿ ಕರೆದೊಯ್ಯಲಾಯಿತು. ಸೆರೆಸಿಕ್ಕ ಈ ಗಂಡಾನೆಯ ವಯಸ್ಸು೨೮-೩೦ ವರ್ಷ ಇರಬಹುದೆಂದು ಸ್ಥಳದಲ್ಲಿ ಅಧಿಕಾರಿಗಳು ಅಂದಾಜಿಸಿದರು.

yogeesh2
Yogeesh, tipturinfo.com
ತುಳಿತಕೆ ಸಿಕ್ಕವರು.. ಇದಕ್ಕೆ ಮೊದಲು ಈ ಆನೆ ಬಾಣಾವಾರ ಸಮೀಪದ ಬುಚ್ಚನಕೊಪ್ಪಲು ಗ್ರಾಮದ ಕೃಷಿ ಕಾರ್ಮಿಕರೊಬ್ಬರನ್ನು ಆ. ೮ರಂದು, ಅದೇ ತಾಲ್ಲೂಕಿನ ಕಣಕಟ್ಟೆ ಸಮೀಪದ ರಾಂಪುರರೈತರೊಬ್ಬರನ್ನು ನ. ೨೮ರಂದು ಕೊಂದು ಹಾಕಿತ್ತು. ಅರಸೀಕೆರೆ ತಾಲ್ಲೂಕಿನಲ್ಲಿ ಹಾವಳಿ ಇಡುವ ಮೊದಲು ಗುಬ್ಬಿ ತಾಲ್ಲೂಕಿನಲ್ಲಿ ಆ. ೨ರಂದು ಈ ಆನೆಯ ದಾಂದಲೆಗೆ ಒಬ್ಬ ಅಸು ನೀಗಿದ್ದ. ಇದಕ್ಕೂ ಮೊದಲು ಬನ್ನೇರುಘಟ್ಟ ಸಮೀಪ ಇಬ್ಬರು ಈ ಆನೆಗೆ ಬಲಿಯಾಗಿದ್ದರು.





ವೆಂಕಟ್ ಎಂಬುವ ಶಾರ್ಪ್ ಶೂಟರ್..
vekat
Sharp shooter venkatesh, tipturinfo.com
ಆನೆಗಳನ್ನು ಹಿಡಿಯಲು ಎಲ್ಲಾ ಬಲಗಳ ಜೊತೆ ಒಬ್ಬ ಉತ್ತಮ ಗುರಿಕಾರ ಮುಖ್ಯ. ಆಲೂರು ವಲಯದ 52 ವರ್ಷದ ಶೂಟರ್ ವೆಂಕಟೇಶ್ ಇದೂವರೆಗೂ 57 ಆನೆಗಳನ್ನು ಶೂಟ್ ಮಾಡಿ ಆನೆಗಳನ್ನು ಸೆರೆಹಿಡಿಯಲು ಶ್ರಮವಹಿಸಿದ್ದಾರೆ. ತಿಪಟೂರಿನ ಗ್ಯಾರಘಟ್ಟದಲ್ಲಿ ಹಿಡಿದ ಆನೆದ 58 ನೆಯದು. ತನ್ನ ಬಂದೂಕಿಗೆ ಅರವಳಿಕೆ ಚಚ್ಚು ಮದ್ದು ಇಟ್ಟು ಗುರಿ ಇಟ್ಟ ಎಂದರೆ ಅದು ತಪ್ಪುವುದಿಲ್ಲ. ಗ್ಯಾರಘಟ್ಟದಲ್ಲಿ ಗುರುವಾರ ತುಂಬಾ ಅಪಾಯದ ಸ್ಥಿತಿಯಲ್ಲಿಯೂ ಮದವೇರಿದ ಆನೆಗೆ ಗುರಿಯಿಟ್ಟು ಅದನ್ನು ನೆಲಕ್ಕೆ ಕೆಡುವುದರಲ್ಲಿ ವೆಂಕಟೇಶ್ ಯಶಸ್ವಿಯಾದರು. ಮತ್ತಷ್ಟು ಅಪಾಯವಾಗುವ ಸನ್ನಿವೇಶವನ್ನು ಅಂತ್ಯಗೊಳಿಸಿದರು.





ಪುಂಡಾನೆ ಹಿಡಿಯಲು ಗಂಡೆದೆಯ ಅಭಿಮನ್ಯು..
ಕಾಡು ಬಿಟ್ಟು ಅಲೆಯುತ್ತಾ ನಾಡಿನ ಜನರಿಗೆ ಉಪದ್ರವ ನೀಡುವ ಆನೆಗಳನ್ನು ಹಿಡಿಯಲು ಸಾಹಸ ಮಾಡುವ ಅಭಿಮನ್ಯುವಿಗೆ ಈಗ ೩೫ ವರ್ಷ. ಎಂತಹ ಮದಗಜಗಳಾದರೂ ನುಗ್ಗಿ ಹಿಡಿಯುವ ರಾಜ್ಯದ ಏಕೈಕ ಪಳಗಿದ ಆನೆ ಇದು. ಇದೂವರೆಗೂ ಸಾಕಷ್ಟು ಆನೆಗಳನ್ನು ಹಿಡಿದು ಇಲಾಖೆಗೆ ಒಪ್ಪಿಸಿರುವ ಅಭಿಮನ್ಯು ಮುಂದೆabimanyu೧೦ ವರ್ಷ ಕೆಲಸ ಮಾಡುವ ಸಾಮಾರ್ಥ್ಯ ಪಡೆದಿದೆ. ಚಿಕ್ಕ ಮರಿಯಿಂದಲೂ ಜೇನುಕುರುಬರು ತಂದು ಸಾಕಿರುವ ಅಭಿಮನ್ಯುವಿಗೆ ಇತರೆ ಆನೆಗಳ ಕಂಡರೆ ಆಗದು ಅದರಲ್ಲಿ ಮನಷ್ಯರ ಗುಣವಿಶೇಷವಿರುವುದರಿಂದ ಕಾರ್ಯಾಚರಣೆಗೆ ಹೇಳಿ ಮಾಡಿಸಿದ ಆನೆಯಾಗಿದೆ. ಅರಣ್ಯ ಇಲಾಖೆಯ ಮೆಚ್ಚಿನ ಅಭಿಮನ್ಯು ಬಿಟ್ಟರೆ ಈ ಸಾಹಸಕ್ಕೆ ಬೇರೆ ಯಾರೂ ಸಿದ್ಧರಿಲ್ಲ. ಇಲಾಖೆ ಯಾವ ಬೇರೆ ಯಾವುದೇ ಆನೆಯನ್ನು ಸಿದ್ಧಗೊಳಿಸಿಲ್ಲ. ಗುಂಪು ಬಿಟ್ಟ ಆನೆಗಳು, ಮದವೇರಿದ ಆನೆ, ಪಂಡಾನೆ, ಒಂಟಿಸಲಗ ಹೀಗೇ ನಾನಾ ತರಹದ ಆನೆಗಳು ಅರಣ್ಯ ಬಿಟ್ಟು ನಾಡಿನ ಕಡೆ ಬಂದು ಜನರಿಗೆ ತೊಂದರೆ ಕೊಡುತ್ತವೆ. ಇಂತಹ ಆನೆಗಳನ್ನು ಹಿಡಿಯಲು ಸರಿಯಾದ ಕಾರ್ಯಾಚರಣೆ ಸಿದ್ಧ ಮಾಡಬೇಕಾಗುತ್ತದೆ. ಆನೆ ಹಿಡಯುವುದು ಕಷ್ಟದ ಮತ್ತು ಅಪಾಯಕಾರಿ ಕೆಲಸ. ಇಲಾಖೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿವೆ. ಇರುವ ಸೌಲಭ್ಯ ಸಾಲುವುದಿಲ್ಲ. ಕೊಟ್ಟಿರುವ ವಾಹನ ಮತ್ತು ಸಿಬ್ಬಂಧಿ ಬಳಕೆಗೆ ಸಾಕಾಗುವುದಿಲ್ಲ. ಇರುವ ಸವಲತ್ತುಗಳಲ್ಲೇ ಇಂತಹ ಸಾಹಸ ಕಾರ್ಯ ಮಾಡಬೇಕಾಗುವ ಜವಬ್ಧಾರಿ ಇಲಾಖೆಯ ಅಧಿಕಾರಿಗಳ ಮೇಲಿದೆ. ಇಂತಹ ಸಾಹಸ ಕಾರ್ಯ ಮಾಡಿದ ಆನೆಗಳನ್ನಲಾಗಲಿ ಅಥವಾ ಸಿಬ್ಬಂಧಿಗಳನ್ನಾಗಲಿ ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇಲಾಖೆಯ ಕರ್ತವ್ಯ.


No comments:

Post a Comment

Blog Archive