Nammuru..... Nammajana

ನಮ್ಮೂರು..... ನಮ್ಮ ಜನ....

Monday, December 13, 2010

ಹಬ್ಬದ ಸಂಬ್ರಮ

ನಮ್ಮೂರ ಹಬ್ಬದ ಹಿಗ್ಗು ನಿಮಗೆಲ್ಲರಿಗೂ ಇರಲಿ..

ಕ್ರೀಡಾ ಹಬ್ಬಕ್ಕೆತೆರೆ ಎಳೆಯುವ ಮುಂಚೆ.. ಊರ ಹಬ್ಬಕ್ಕೆ ತೆರೆ ತೆರೆಯಿತು..

ಹಂಸ ತೇರೇರಿ ನಗರ ಜಾತ್ರೆಯ ಸುತ್ತಿದ ಗಣಾದಿಪನ ಹಬ್ಬ, ವಿಜೃಂಭಿಸಿದ ಸವಿ ಸಂಭ್ರಮದ ಕ್ಷಣ..


ಆ ದಿನಗಳ ಇನ್ ಫೋ ವರದಿಗಳು..

ದಿನಾಂಕ 4/12/2010
ಉತ್ಸವಗಳ ಉತ್ಸಾಹ... ನಗರದಲ್ಲಿ ಈಗ ಗಣಪತಿಂ ಬಜೇ...

ಇತಿಹಾಸ ಹೊತ್ತ ಈ ಹಬ್ಬ ಸಿಂಗರಿಸಿದೆ ನಗರದ ಮನೆ ಮನ...
ಡೋಲು ತಮಟೆ ಚಂಡೆ.. ವೀರಗಾಸೆ ಡೊಳ್ಳು ಪೊಜಾ ಕುಣಿತಗಳ.. ಬಾಣ ಬಿರಸುಗಳ ಮುಗಿಲು ಮುಟ್ಟುವ ವೈಭವ..
gn2
Tiptur ganesha, tiptur
ಇಂದು ಗಜಾನನ ದರ್ಬಾರು...
ಶ್ರೀ ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಮತ್ತು ಭಾನುವಾರ ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಯಲಿದೆ.ಬೆಂಗಳೂರು ಕರಗದಷ್ಟೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಗಣಪತಿ ಜಾತ್ರೆಗೆ ನಗರ ಸರ್ವ ರೀತಿಯಲ್ಲಿ ಸಿದ್ಧಗೊಂಡಿದೆ. ಶುಕ್ರವಾರ ಗಣಪತಿಯ ಮಹಾ ಮಂಗಳಾರತಿ ಮಹೋತ್ಸವ ಸಂಪ್ರದಾಯದಂತೆ ನೆರವೇರಿತು. ಉತ್ಸವಕ್ಕಾಗಿ ಈಗಾಗಲೇ ನಗರ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ನೂರಾರು ಅಂಗಡಿ ಮುಂಗಟ್ಟುಗಳು ನೆರೆದಿವೆ. ಮನೋರಂಜನೆ ಆಟದ ದೊಡ್ಡದೊಡ್ಡ ಗಾಲಿಗಳು, ಉಯ್ಯಾಲೆಗಳು ತಲೆ ಎತ್ತಿವೆ.ಶನಿವಾರ ಸಂಜೆ ಆಕರ್ಷಕ ದರ್ಬಾರು ಹೂ ಮಂಟಪದಲ್ಲಿ ಆರಂಭವಾಗುವ ಗಣಪತಿ ಉತ್ಸವದ ಸೊಬಗನ್ನು ಕಣ್ತುಂಬಿಕೊಳ್ಳಲು ನಗರ ಉತ್ಸುಕವಾಗಿದೆ. ತಮಟೆ, ಡೊಳ್ಳು ಕುಣಿತ, ವೀರಗಾಸೆ, ಚಂಡೇವಾದ್ಯ, ಪೂಜಾಕುಣಿತ, ನಾದಸ್ವರ, ಕೀಲುಕುದುರೆ ಮತ್ತಿತರೆ ಕಲಾತಂಡಗಳು ಪಾಲ್ಗೊಳ್ಳಲಿವೆ. ರಾಜಬೀದಿಗಳಲ್ಲಿ ರಾತ್ರಿಯಿಡೀ ಮೆರವಣಿಗೆ ಸಾಗುತ್ತದೆ. ಮಧ್ಯರಾತ್ರಿ ಕೆರೆ ಏರಿ ಮೇಲೆ ಆಕರ್ಷಕ ಸಿಡಿಮದ್ದು, ಬಾಣ, ಬಿರುಸು ಪ್ರದರ್ಶನವಿರುತ್ತದೆ. ಭಾನುವಾರ ನಗರದ ವಿವಿದ ಬಡಾವಣೆಗಳಲ್ಲಿ ಸಾಗುವ ಮೆರವಣಿಗೆ ಸಂಜೆಗೆ ಕೆರೆ ಬಳಿ ಬಂದು ನಿಲ್ಲಲಿದೆ. ನಂತರ ವಿಸರ್ಜನೆ ಸಂದರ್ಭದಲ್ಲಿ ಆತ್ಯಾಕರ್ಷಕ ಸಿಡಿ ಮದ್ದು ಪ್ರದರ್ಶನಗೊಳ್ಳುತ್ತದೆ. ಮದ್ಯ ನಿಷೇಧ: ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ೨ರಿಂದ ಭಾನುವಾರ ಮಧ್ಯರಾತ್ರಿ ೧೨ರವರೆಗೆ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬಂದೋಬಸ್ತ್: ಜಾತ್ರೆಗೆ ಅಪಾರ ಜನ ಸೇರುವುದರಿಂದ ಕಾನೂನು ಸುವಸ್ಥೆ ಕಾಪಾಡಲು ವ್ಯಾಪಾಕ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಇಲ್ಲಿನ ಎಲ್ಲಾ ಸಿಬ್ಬಂದಿ ಜತೆಗೆ ಜಿಲ್ಲಾ ಮೀಸಲು ಪಡೆಯ ನಾಲ್ಕು ತುಕಡಿ, ಹೊರಗಿನ ಮೂವರು ಸಿಪಿಐ, ಐವರು ಪಿಎಸ್‌ಐ, ಎಂಟು ಎಎಸ್‌ಐ ಸೇರಿದಂತೆ ಅಪಾರ ಸಿಬ್ಬಂದಿಯನ್ನು ಬಳಸಲಾಗುತ್ತಿದೆ ಎಂದು ಎಎಸ್‌ಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
5/12/2010..
ವಿಜೃಂಬಿಸುತಿದೆ ಗಜಾನನ ಉತ್ಸ..
ನಗರ ತುಂಬಿದೆ ಸಾಂಸ್ಕೃತಿಕ ವೈಭವ..
ರಾತ್ರೆ ಜಾತ್ರೆ ಜೊತೆ ಮನಸೂರೆಗೊಂಡ ಪಟಾಕಿ ಸಿಡಿಮದ್ದು ಪ್ರದರ್ಶನ...
ganap2
Cultural activities in ganesh festival, tiptur

ಸತ್ಯಗಣಪತಿ ವಿಸರ್ಜನಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ವೈಭವ ಅದ್ಧೂರಿ ಮೆರವಣಿಗೆ ನಡೆಯಿತು. ಶುಕ್ರವಾರ ಗಣಪತಿಯ ಮಹಾ ಮಂಗಳಾರತಿ ಮಹೋತ್ಸವ ಸಂಪ್ರದಾಯದಂತೆ ನೆರವೇರಿತು. ನಗರವೆಲ್ಲ ದೀಪಾಲಂಕಾರಗಳಿಂದ ಕಂಗೊಳಿಸುತಿತ್ತು . ಶನಿವಾರ ಸಂಜೆ ಆಕರ್ಷಕ ದರ್ಬಾರು ಹೂ ಮಂಟಪದಲ್ಲಿ ಆರಂಭವಾದ ಗಣಪತಿ ಉತ್ಸವದ ಸೊಬಗನ್ನು ನೆರೆದ ನಗರದ ಇಪ್ಪತ್ತು ಸಾವಿರ ಜನ ಕಣ್ತುಂಬಿಕೊಂಡರು . ತಮಟೆ, ಡೊಳ್ಳು ಕುಣಿತ, ವೀರಗಾಸೆ, ಚಂಡೇವಾದ್ಯ, ಪೂಜಾಕುಣಿತ, ನಾದಸ್ವರ, ಕೀಲುಕುದುರೆ ಮತ್ತಿತರೆ ಕಲಾತಂಡಗಳು ರಾತ್ರಿಯಿಡೀ ತಮ್ಮ ಕಲಾವಂತಿಕೆ ಪ್ರದರ್ಶಿಸಿದವು. ರಾಜಬೀದಿಗಳಲ್ಲಿ ರಾತ್ರಿಯಿಡೀ ಮೆರವಣಿಗೆ ಸಾಗಿತು. ಮಧ್ಯರಾತ್ರಿ ಕೆರೆ ಏರಿ ಮೇಲೆ ಆಕರ್ಷಕ ಸಿಡಿಮದ್ದು, ಬಾಣ, ಬಿರುಸು ಪ್ರದರ್ಶನ ನೆರೆದವರ ಮನಸೂರೆಗೂಂಡವು. ಮೆರವಣಿಗೆ ನಗರಬೀದಿಗಳಲ್ಲಿ ಈಗಲು ನಡೆಯುತ್ತಿದೆ.
ಮುಂದಿನ ವೀಡಿಯೂ ವರದಿಗಳನ್ನು ನಿಮ್ಮ ತಿಪಟೂರು ಇನ್ ಫೋ ನ್ಯೂಸ್ ಚಾನೆಲ್ ನಲ್ಲಿ ವೀಕ್ಷಿಸಿ...

No comments:

Post a Comment

Blog Archive