Nammuru..... Nammajana

ನಮ್ಮೂರು..... ನಮ್ಮ ಜನ....

Sunday, September 4, 2011

"ಸೊಪ್ಪು ಸೆದೆ"



ತರಾವರಿ ಸೊಪ್ಪಿನ ನೋಟ; ಮುದ್ದೆ ಸಾರಿನೂಟ 
102ನಾಲ್ಕೈದು ತರಹದ ಸೊಪ್ಪಿನ ರುಚಿ ನೋಡಿ ತೃಪ್ತಿ ಕಂಡಿದ್ದ ನಗರ ಮತ್ತು ಗ್ರಾಮೀಣ ಜನರಿಗೆ ತಾಲೂಕಿನ ಕಲ್ಲಹಳ್ಳಿ ಬೆಟ್ಟದ ರಾಮೇಶ್ವರ ತಪ್ಪಲಲ್ಲಿ ಇತ್ತಿಚಿಗೆ  ನಡೆದ ಸೊಪ್ಪು ಸದೆ  ಕಾರ್ಯಕ್ರಮದಲ್ಲಿ  ಸುಮಾರು 50ಕ್ಕೂ ಹೆಚ್ಚು ಜಾತಿಯ ಸೊಪ್ಪಿನ ರುಚಿ ನೋಡಿ ನಿಬ್ಬೆರಗಾದ ಪ್ರಸಂಗ ನಡೆಯಿತು. 
ಕಲಬೆರಕೆ ಮತ್ತು ಕೀಟನಾಶಕ ಮಿಶ್ರಿತ ಆಹಾರದಿಂದ ಮಾಲಿನ್ಯಗೊಂಡಿರುವ ಮನಷ್ಯನ ಆರೋಗ್ಯಕ್ಕೆ ಸೊಪ್ಪಿನ ಬಳಕೆ ಒಂದಷ್ಟು ಶಕ್ತಿ ನೀಡ ಬಹುದು ಎಂದು ನಾನಾ ವೈಧ್ಯರು ಶಿಫಾರಸ್ಸು ಮಾಡುತ್ತಾರೆ. ನಾನಾ ರೋಗಗಳಿಗೆ ಹೆದರಿದ ನಗರ  ವಾಸಿಗಳು ಇತ್ತೀಚೆಗೆ ಸೊಪ್ಪನ್ನು ಬಳಸಲು ಆರಂಭಿಸಿದ್ದಾರೆ. ಮೆಂತ್ಯೆ ಸೊಪ್ಪು, ಅರಿವೆ ಮತ್ತು ದಂಟಿನ ಸೊಪ್ಪು, ಅನಗೋನೆ ಮತ್ತು ಸಬ್ಸಿಗೆ ಸೊಪ್ಪು,  ಇತ್ಯಾದಿ ಸುಮಾರು ೧೦ಕ್ಕೂ ಹೆಚ್ಚು ಜಾತಿಯ ಸೊಪ್ಪಿನ ಪರಿಚಯವಷ್ಟೆ ಇವರಿಗಿದೆ. ಆದರೆ ನಗರ ವಾಸಿಗಳ ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೂ ಪರಿಚಯವಿಲ್ಲದ ನೂರಾರು ಜಾತಿಯ ಯೋಗ್ಯ ಸೊಪ್ಪುಗಳು ನಮ್ಮ ನಡುವೆ ಇವೆ ಎನ್ನುವ ವಿಚಾರ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಾದ್ದು.
ಹೌದು, ಸೊಪ್ಪು-ಸದೆ ಅರಿವು ಮತ್ತು ರುಚಿ ಯೋಜನೆಯ ಮುರಳಿಯೊಂದಿಗೆ ಬೆಟ್ಟದ ರಾಮೇಶ್ವರ ಪ್ರೌಡಶಾಲೆಯ ಶಿಕ್ಷಕರು103 ಮತ್ತು ವಿದ್ಯಾರ್ಥಿಗಳು ಸೇರಿ ಸೊಪ್ಪು ಸದೆ ಎನ್ನುವ ಇಂತಹ ಅಪರೂಪದ ವಿಶೇಷ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಂಡಿದ್ದರು. ಶಾಸಕ ಬಿ.ಸಿ.ನಾಗೇಶ್, ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ಎಎಸ್‌ಪಿ ಡಾ.ಬೋರಲಿಂಗಯ್ಯ, ತಹಸೀಲ್ದಾರ್ ವಿಜಯಕುಮಾರ್, ಸಿಡಿಪಿಒ ಎಸ್.ನಟರಾಜು, ಜನಾರ್ಧನ್, ಡಾ.ಮೈಥಿಲಿ, ಪಾರಂಪರಿಕ ವೈಧ್ಯ ಪರಮಶಿವಯ್ಯ, ಸಾವಯವ ಕೃಷಿಕ ಸಮಾಜದ ಅಧ್ಯಕ್ಷ ಪ್ರೊ.ನಂಜುಂಡಪ್ಪ, ಪರಿಸರ ಪ್ರೇಮಿ ಷಡಕ್ಷರ ದೇವರು, ಕೃಷಿಕ ಹರಿಂಜನ, ಮುಖ್ಯಶಿಕ್ಷಕ ಕೃಷ್ಣಗೌಡ, ಶಾಲೆಯ ಸಿಬ್ಬಂಧಿ ಜೊತೆಗೆ ಪತ್ರಕರ್ತರು ಹಾಗೂ ನಾನಾ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹರ್ಷಪಟ್ಟರಲ್ಲದೇ ಜೀವಮಾನದಲ್ಲೇ ಕೇಳದ ನಾನಾ ಜಾತಿಯ ಸೊಪ್ಪು ಸದೆಯ ರುಚಿ ನೋಡಿ ಅತ್ಯಾನಂದ ಪಟ್ಟರು.
ಸುಮಾರು ೭೫ಕ್ಕೂ ಹೆಚ್ಚು ಮಕ್ಕಳು ಬಯಲು, ಹೊಲ, ಗದ್ದೆ, ಗುಡ್ಡ, ಬೇಲಿಯಲ್ಲಿ ಸಿಗುವ ನಾನಾ ಜಾತಿಯ ಸೊಪ್ಪನ್ನು ಕಿತ್ತುತಂದು ತಮ್ಮ ತಮ್ಮ 10ಮನೆಗಳಲ್ಲಿ ರುಚಿ ರುಚಿಯಾಗಿ ಸಾರು, ಪಲ್ಯ ಮಾಡಿಕೊಂಡು ಎಲ್ಲರಿಗೂ ಹೊಸ ರುಚಿ ತೋರಿಸಿದರು. ಉತ್ತರಾಣಿ ಸೊಪ್ಪು, ಕಾಡ ಸಬ್ಸಿಗೆ, ನಾಲ್ಕೆಲೆ
ಹೊನ್ನೆ, ಮುಳ್ಳುಸೀಗೆ ಸೊಪ್ಪು, ದಾಗಡಿಬಳ್ಳಿ, ವಾಯುನಾರಾಯಣಿ ಸೊಪ್ಪು, ಚುರುಕಿನ ಸೊಪ್ಪು, ಅರಸೀಕೆರೆ ಮುಳ್ಳಿನ ಸೊಪ್ಪು, ಒಂದೆಲಗ, ಗೊಡ್ಡರಿವೆ ಸೊಪ್ಪು, ಜಾಲಮೂಲಂಗಿ ಸೊಪ್ಪು, ನಾರಬಳ್ಳಿ, ಹಡಗು ಚಿಟ್ಟ, ಸೀಮೆ ಅನಗೋನೆ, ಅಕ್ಕಿ ಅವರೆ ಸೊಪ್ಪು, ಮಂಗರವಳ್ಳಿ ಸೊಪ್ಪು ಹೀಗೆ ನಮ್ಮ ಸುತ್ತಾಮುತ್ತ ಇರುವ ನೂರಾರು ಜಾತಿಯ ತರೆವಾರಿ ಸೊಪ್ಪಿನ ಸಾರು, ಪಲ್ಯವನ್ನು ಮಾಡಿ ತಂದಿದ್ದರು. ಅವುಗಳ ಒಂದೊಂದು ರುಚಿ ಸವಿಯುತ್ತಾ ಅಬ್ಬಾ ಎನ್ನುವಂತಿತ್ತು.ಮಕ್ಕಳು ಪ್ರದರ್ಶಿಸಿ, ವಿವರಿಸುತ್ತಾ ನೀಡಿದ ನಾನಾ ಜಾತಿಯ ಸೊಪ್ಪಿನ ಹೆಸರು ಕೇಳಿದ ಗಣ್ಯರು ಅಚ್ಚರಿ ಪಟ್ಟರಲ್ಲದೇ ನೂರಾರು ಸೊಪ್ಪಿನ ರುಚಿ ಸವಿದು ಬಾಯಿ ಚಪ್ಪರಿಸಿದರು.
ನಂತರ ಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಔತಣ ಕೂಟದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಜಾತಿಯ ಸೊಪ್ಪಿನಿಂದ ಮಾಡಿದ ಸಾಂಬಾರು, ಮುದ್ದೆ, ನಾನಾ ಜಾತಿಯ ಹಸಿರು ಸೊಪ್ಪಿನ ಪಲ್ಯ, ಕೋಸಂಬರಿ ರುಚಿ ನೋಡಿದ ಗಣ್ಯರು ಉಂಡು ಬೀಗುತ್ತಾ ಏನೋ ಒಂದು ತರಹದ ಹೊಸ ಉಲ್ಲಾಸದಲ್ಲಿ ಕೃತಾರ್ಥರಾದೆವು ಎನ್ನುವಂತಿತ್ತು. ನಿಜಕ್ಕೂ ಇದು ಒಂದು ತೆರನಾದ ಹೊಸ ಅನುಭವ.104
ನಾನಾ ಔಷಧಿ ಸಸ್ಯಗಳ ಗಣಿ ಬೆಟ್ಟದ ರಾಮೇಶ್ವರ ಗುಡ್ಡ:
ತಾಲೂಕಿನ ಬೆಟ್ಟದ ರಾಮೇಶ್ವರ ಗುಡ್ಡ ಮಿನಿ ಕಲ್ಲೆತ್ತಗಿರಿ ಎನಿಸಿದೆ. ಕೇವಲ ೧೭.೫ ಎಕರೆ ಪ್ರದೇಶದಲ್ಲಿ ಹರಡಿರುವ ಸಣ್ಣ ಗುಡ್ಡ ಮಿನಿ ಸಂಜೀವಿನಿ ಗುಡ್ಡದಂತಿದೆ. ಇಲ್ಲಿ ಇರುವ ಸಣ್ಣ ಬಂಡೆಯ ಮೇಲೆ ಶ್ರೀರಾಮೇಶ್ವರ ದೇವಾಲಯ ಇದ್ದು ಇಡೀ ಪ್ರದೇಶ ಒಂದು ಧಾರ್ಮಿಕ ಕ್ಷೇತ್ರದಂತಿದೆ. ಆದರೆ ಗುಡ್ಡದ ಸುತ್ತಲೂ ನಾನಾ ಜಾತಿಯ ಮರಗಿಡಗಳ ನಡುವೆ ಔಷಧ ಸಸ್ಯಗಳು ರಾಶಿ ರಾಶಿ ತುಂಬಿದೆ. ಶತಾವರಿ, ಮಧುನಾಶಿನಿ, ಮಯೂರಿ ಶಕೆ, ವಿಷಮುಷ್ಟಿ, ನೆಲನುಗ್ಗೆ, ಮಂಡಗಳ್ಳಿ, ತಾಮ್ರಶಕೆ, ಮಯೂರಿ ಶಕೆ, ಕಾಡುಸಬ್ಸಿಗೆ, ಕಾಡು ಮಲ್ಲಿಗೆ, ಕಾಡು ಈರುಳ್ಳಿ, ಕಾಡು ಹೆಸರು, ಕಾಡು ಮೆಣಸು, ಕಾರೆ, ಸಹದೇವಿ, ಪಟಪಟೆ, ದಾಗಡಿ, ಉತ್ತರಾಣಿ, ಅಮೃತಬಳ್ಳಿ, ಈಶ್ವರಿ ಬಳ್ಳಿ, ನಾಗಬಲ, ಬಲ, ಮಹಾಬಲ ಇತ್ಯಾದಿ ನಾನಾ ಜಾತಿಯ ಔಷಧಿ ಸಸ್ಯಗಳ ಇಲ್ಲಿ ತುಂಬಿವೆ

No comments:

Post a Comment

Blog Archive