Nammuru..... Nammajana

ನಮ್ಮೂರು..... ನಮ್ಮ ಜನ....

Sunday, September 4, 2011

ಕ್ಯಾಮೆರಾ ಕಣ್ಣಲ್ಲಿ ಪರಿಸರ ಕಾಳಜಿ


 

11TPR_07
ವೃತ್ತಿಯ ಕಣ್ಣಿಗೆ ಪ್ರವೃತ್ತಿಯ ಕ್ಯಾಮೆರಾ ಹಿಡಿದಾಗ ಲಾಭದ ಉದ್ದೇಶ ಮೀರಿ ಸಮಾಜ ಸಾರ್ಥಕತೆಯ ಒಳನೋಟ ಕಾಣಿಸುತ್ತದೆ ಎಂಬುದನ್ನು ಇಲ್ಲಿನ ಛಾಯಾಚಿತ್ರ ಸಂಘದವರು ಮಾಡಿ ತೋರಿಸಿದ್ದಾರೆ.
ಹಸಿರು ತಿಪಟೂರು ವೇದಿಕೆಯಿಂದ ಈಚೆಗೆ ನಡೆದ ಪರಿಸರ ಆಂದೋಲನದಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಛಾಯಾಚಿತ್ರಕಾರರ ಸಂಘದವರು ವೃತ್ತಿಗೆ ಸಂಬಂಧಿಸಿ ಪರಿಸರಪರ ಕಾಣಿಕೆ ನೀಡಬಹುದೇ ಎಂದು ಯೋಚಿಸಿದ್ದರು. ಅದರ ಫಲವಾಗಿ ಪರಿಸರಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಸ್ಪರ್ಧೆ ಏರ್ಪಡಿಸಿ ವೃತ್ತಿನಿರತರಷ್ಟೇ ಅಲ್ಲದೆ ಸಾರ್ವಜನಿಕರಿಂದಲೂ ಫೋಟೋ ಆಹ್ವಾನಿಸಿದ್ದರು. ಈ ಸ್ಪರ್ಧೆಗೆ ಬಂದಿದ್ದ ಕೆಲ ಫೋಟೋಗಳು ಇಂಥ ನಗರದಲ್ಲೂ ಕ್ಯಾಮೆರಾ ಕಣ್ಣಿನ ವಿಸ್ತಾರ ಅವಕಾಶಗಳನ್ನು ತೆರೆದಿಟ್ಟವು.
ಕೆಲ ವೃತ್ತಿನಿರತರು ವಿಶಿಷ್ಟ ಫೋಟೋ ಪ್ರದರ್ಶಿಸಿ ಮೆಚ್ಚುಗೆಯನ್ನಷ್ಟೇ ಅಲ್ಲದೆ, ಬಹುಮಾನವನ್ನೂ ಪಡೆದರು. ವೃತ್ತಿಯ ಕ್ಯಾಮೆರಾ ಕಣ್ಣಿನ ಜತೆ ಮತ್ತೊಂದು ಕಣ್ಣು ತೆರೆದಿಟ್ಟರೆ ಕ್ಯಾಮೆರಾಮನ್‌ಗಳು 
11TPR_08
ಒಂದು ಚಿತ್ರದಲ್ಲೇ ಸಾವಿರ ಪದಗಳ ಶಕ್ತಿಯನ್ನು ತುಂಬಬಲ್ಲರು ಎಂಬುದಕ್ಕೆ ಪ್ರದರ್ಶನಗೊಂಡ ಫೋಟೋಗಳು ಸಾಕ್ಷಿಯಾಗಿದ್ದವು. ಅಷ್ಟೇ ಅಲ್ಲದೆ ಆ ಫೋಟೋಗಳಿಗೆ ಸಂಘದವರೇ ವಿಶಿಷ್ಟ ಅಡಿಬರಹ ನೀಡಿ ಆಕರ್ಷಣೆ, ವ್ಯಂಗ್ಯ, ವಿಡಂಭನೆ ಸೃಷ್ಟಿಸಿದ್ದರು.ಅವುಗಳಲ್ಲಿ ಮೊದಲ ಬಹುಮಾನ ಪಡೆದ ಬಸವೇಶ್ವರ ಸ್ಟುಡಿಯೋದ ರವೀಂದ್ರ ಅವರ ‘ಪುಕ್ಕಟ್ಟೆ ನೀರಿಗೆ ಕಾಸಿನ ಬರೆ ಅಡಿಬರಹದ ಫೋಟೋ ವ್ಯಂಗ್ಯೋಕ್ತಿಯಾಗಿತ್ತು. ಸಾರ್ವಜನಿಕ ನಲ್ಲಿಯಲ್ಲಿ ಸೋರಿ ಹೋಗುತ್ತಿರುವ ನೀರಿನ ಹಿನ್ನೆಲೆಯಲ್ಲಿ ಕಾಸಿಗೆ ನೀರು ಮಾರುವ ಟ್ಯಾಂಕರ್ ಸಾಗಿ ಹೋಗುತ್ತಿರುವುದು ನೀರಿನ ಮಿತ ಬಳಕೆಯ ಔಚಿತ್ಯವನ್ನು ಎತ್ತಿ ತೋರುತ್ತಿತ್ತು. ಎರಡನೇ ಬಹುಮಾನ ಪಡೆದ ನೊಣವಿನಕೆರೆ ವಿಷ್ಣು ಸ್ಟುಡಿಯೋದ ಲೋಕೇಶ್ ಅವರ ‘ಎಂದೂ ಮುಗಿಯದ ಪಯಣ ಅನ್ನದೇವರ ದೃಶ್ಯಕಾವ್ಯ ನಿರ್ಮಿಸಿತ್ತು. ಸುಂದರ್ ಸ್ಟುಡಿಯೋ ರಮೇಶ್ ಅವರ ‘ನಾಳೆಯ ಭವಿಷ್ಯ ಹೇಳುತ್ತಾರೆ ಶೀರ್ಷಿಕೆಯ ಫೋಟೋವಂತೂ ಪರಿಸರ ಮಾಲಿನ್ಯದ ಭವಿಷ್ಯವನ್ನು ನುಡಿಯುತ್ತಿತ್ತು.
ಸಿರಿಗಂಧ ಗುರು ಅವರು ಚಿಪ್ಪು ಸುಡುವ ಸ್ಥಳದ ಹೊಗೆ ದೃಶ್ಯದ ಫೋಟೋ ತೆಗೆದು ‘ನನ್ನನ್ನು ಹುಡುಕಿ ಎಂದು ಹೊಗೆಯಲ್ಲಿ ‘ತಿಪಟೂರು ಮೂಡಿಸಿದ್ದು ವಿಶೇಷ ಪ್ರಯತ್ನವಾಗಿತ್ತು. ತೆಂಗಿನ ಪುಡಿ ಕಾರ್ಖಾನೆಗಳ ತ್ಯಾಜ್ಯ ನಿಂತು ಮ್ಯಾಪ್ ಸೃಷ್ಟಿಯಾಗಿರುವ ಚಿತ್ರ ಮಲಿನದ ವಿಸ್ತಾರ ಬಿಂಬಿಸಿದೆ. ಇವಷ್ಟೇ ಅಲ್ಲದೆ ಕೆಲ ಫೋಟೋಗಳು ಭಾಷೆಗೆ ನಿಲುಕದ ಭಾವ ಬಿಚ್ಚಿಟ್ಟಿದ್ದವು.

No comments:

Post a Comment

Blog Archive